ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸ್ವಾಗತ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರದ ಬಹುಮುಖ್ಯ ಇಲಾಖೆಗಳಲ್ಲಿ ಒಂದು. ಸರ್ಕಾರ ತನ್ನ ಜನರಿಗಾಗಿ ಹಮ್ಮಿಕೊಳ್ಳುವ ಪ್ರಗತಿಪರ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸಿ ಯೋಜನೆಗಳ ಫಲಾನುಭವಿಗಳಾಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದು. ಇದಕ್ಕಾಗಿ ವಿಭಿನ್ನ ಸಮೂಹ ಮಾಧ್ಯಮಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳುವುದು. ಅದಕ್ಕಾಗಿ ಇಲಾಖೆ ಪೂರ್ವಭಾವಿ ಕಾರ್ಯಕ್ರಮಗಳನ್ನು ಆಯೋಜಿಸುವುದು. ಸರ್ಕಾರ ಇಲಾಖೆಯ ಕಾರ್ಯಚಟುವಟಿಕೆಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ ಆಯ-ವ್ಯಯದಲ್ಲಿ ಯೋಜನೆ ಮತ್ತು ಯೋಜನೇತರ ಶೀರ್ಷಿಕೆಯಡಿ ಅನುದಾನ ಬಿಡುಗಡೆ ಮಾಡುವುದು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯವ್ಯಾಪಿ ಹಾಗೂ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ತನ್ನ ಕಾರ್ಯಜಾಲವನ್ನು ಹೊಂದಿದೆ. ಕೇಂದ್ರ ಕಛೇರಿಯನ್ನು ಸೇರಿದಂತೆ ಎಲ್ಲಾ 30 ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾಧಿಕಾರಿಗಳ ಕಾರ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ನವದೆಹಲಿಯಲ್ಲಿ ಕರ್ನಾಟಕ ವಾರ್ತಾ ಕೇಂದ್ರ ಮತ್ತು ಹುಬ್ಬಳ್ಳಿಯಲ್ಲಿ ರಾಜ್ಯ ವಾರ್ತಾ ಕೇಂದ್ರಗಳಿದ್ದು, ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಮಾಹಿತಿ ಒದಗಿಸುವ ಕಾರ್ಯವನ್ನು ನಿರ್ವಹಿಸುತ್ತಿವೆ.

ಇತ್ತೀಚಿನ ಸುದ್ದಿಗಳು
ನಂ.17 ವಾರ್ತಾ ಸೌಧ, ಭಗವಾನ್ ಮಹಾವೀರ್ ರಸ್ತೆ (ಇನ್ ಫಾಂಟ್ರಿ ರಸ್ತೆ) ಬೆಂಗಳೂರು-560001,
080-22028001, 080-22863794,ಫಾಕ್ಸ್ -2208041 (C)2016 ಎಲ್ಲಾ ಹಕ್ಕುಗಳು ಕಾಯ್ದಿರಿಸಿದೆ
ವೆಬ್ ಸೈಟ್ ವಿನ್ಯಾಸ , ಅಭಿವೃದ್ಧಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಕರ್ನಾಟಕ ಸರ್ಕಾರ,
Hosted at National Informatics Centre, Karnataka State Unit,
good hits
Websites Statistics Tool